ಕೂಸಿನ ಕಂಡಿರಾ ಗುರು ಮುಖ್ಯಪ್ರಾಣ ಕಂಡಿರ




Lyrics:


ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರ
ಬಾಲನ ಕಂಡೀರಾ ಬಲವಂತನ ಕಂಡೀರ

ಅಂಜನಿಯುದರದಿ ಪುಟ್ಟಿತು ಕೂಸು
ರಾಮನ ಚರಣಕ್ಕೆರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾ ಪುರವನೆ ಸುಟ್ಟಿತು ಕೂಸು II1II

ಭಂಡಿ ಅನ್ನವನುಂಡೀತು ಕೂಸು
ಬಕನ ಪ್ರಾಣವಕೊಂದಿತು ಕೂಸು
ವಿಷದಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು II2II

ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತಮತವನ್ನುದ್ಧರೀಸಿತು ಕೂಸು
ಮಧ್ವರಾಯನೆಂಬೊಹೆಸರಿನ ಕೂಸು
ಪುರಂದರ ವಿಠಲನ ಪ್ರೇಮದ ಕೂಸು II3II

No comments: